ಪ್ರೀಮಿಯರ್ ಪದ್ಮಿನಿ ರಮೇಶ್ ಇಂದಿರಾ ಬರೆದು ನಿರ್ದೇಶಿಸಿರುವ ೨೦೧೯ ರ ಭಾರತೀಯ ಕನ್ನಡ ಭಾಷೆಯ ಚಲನಚಿತ್ರ. ಈ ಚಿತ್ರವು ಕಿರುತೆರೆಯ ನಿರ್ಮಾಪಕಿ ಶ್ರುತಿ ನಾಯ್ಡುರವರು ನಿರ್ಮಿಸಿರುವ ಮೊದಲ ಚಲನಚಿತ್ರ, ಇದನ್ನು ಅವರು ತಮ್ಮ ಸ್ವಂತ ಬ್ಯಾನರ್ ಶ್ರುತಿ ನಾಯ್ಡು ಚಿತ್ರ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಜಗ್ಗೇಶ್, ಮಧೂ, ಸುಧಾರಾಣಿ, ಹಿತಾ ಚಂದ್ರಶೇಖರ್ ಮತ್ತು ವಿವೇಕ್ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರವರ್ಗದಲ್ಲಿ ಎಚ್‌ಜಿ ದತ್ತಾತ್ರೇಯ, ಭಾರ್ಗವಿ ನಾರಾಯಣ್ ಮತ್ತು ಪ್ರಮೋದ್ ಇದ್ದಾರೆ. ಚಿತ್ರದ ತಾಂತ್ರಿಕ ಸಿಬ್ಬಂದಿಗಳಲ್ಲಿ ಸಂಗೀತ ಸಂಯೋಜಕರಾಗಿ ಅರ್ಜುನ್ ಜನ್ಯಾ, ಛಾಯಾಗ್ರಾಹಕರಾಗಿ ಅದ್ವೈತ ಗುರುಮೂರ್ತಿ, ಸಂಕಲನಕಾರರಾಗಿ ರಾಜೇಂದ್ರ ಅರಸ್ ಕೆಲಸ ನಿರ್ವಹಿಸಿದ್ದಾರೆ. ಈ ಚಿತ್ರವು ಮಾರ್ಚ್ ೨೦೧೮ ರ ಆರಂಭದಲ್ಲಿ ಪ್ರಾರಂಭವಾಯಿತು ಮತ್ತು ೨೬ ಏಪ್ರಿಲ್ ೨೦೧೯ ರಂದು ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಜೀ ಕನ್ನಡ ವಾಹಿನಿಯಲ್ಲಿ 2019 ರ ಸೆಪ್ಟೆಂಬರ್ 29 ರಂದು ಚಲನಚಿತ್ರ ಪ್ರಸಾರವಾಯಿತು. == ಪಾತ್ರವರ್ಗ == ವಿನಾಯಕ್ ಪಾತ್ರದಲ್ಲಿ ಜಗ್ಗೇಶ್ ಶೃತಿ ಪಾತ್ರದಲ್ಲಿ ಮಧೂ ವಿವೇಕ್ ಸಿಂಹ ಸ್ಪಂದನ ಪಾತ್ರದಲ್ಲಿಸುಧಾರಾಣಿ ಹಿತಾ ಚಂದ್ರಶೇಖರ್ ಚಾಲಕ ನಂಜುಂಡಿಯಾಗಿ ಪ್ರಮೋದ್ ಎಚ್.ಜಿ ದತ್ತಾತ್ರೇಯ ರಮೇಶ್ ಇಂಡಿಯಾರ ಭಾರ್ಗವಿ ನಾರಾಯಣ್ == ಧ್ವನಿಪಥ == ಅರ್ಜುನ್ ಜನ್ಯಾ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಈ ಆಲ್ಬಂ ನಾಲ್ಕು ಹಾಡುಗಳನ್ನು ಒಳಗೊಂಡಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಪ್ರೀಮಿಯರ್ ಪದ್ಮಿನಿ (2019)